ಔರಾ ಸ್ಟುಡಿಯೋ ಉದ್ಘಾಟನೆ ಮಾಲೀಕರಿಗೆ ಶುಭ ಹಾರೈಕೆ. ನವ ಉದ್ಯಮಿಗಳಿಗೆ ಪ್ರೋತ್ಸಾಹ, ಶುಭ ಹಾರೈಕೆ
ಇಂದು ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಔರಾ (ಬ್ಯೂಟಿ ಪಾರ್ಲರ್) ಸ್ಟುಡಿಯೋವನ್ನು ಉದ್ಘಾಟಿಸಿ, ಶುಭ ಹಾರೈಸಿದೆ.ಈ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
Best wishes to the owners for the opening of Aura Studio. Encouragement and best wishes to new entrepreneurs.
Sri Muniraju inaugurated the newly started Aura (Beauty Parlour) Studio at Abbigere in Dasarahalli Constituency today and wished them all the best. On this occasion, Shri Mariswamy, former president of Zilla Panchayat and others were present.
ಅಣ್ಣಮ್ಮದೇವಿಗೆ ವಿಶೇಷ ಪೂಜೆ, ಸರ್ವರ ಒಳಿತಿಗಾಗಿ ಪ್ರಾರ್ಥನೆ
ದಾಸರಹಳ್ಳಿಯ ನೆಲಮಹೇಶ್ವರಿ ನಗರದಲ್ಲಿ ಗಂಧದಗುಡಿ ಕನ್ನಡ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ಅಣ್ಣಮ್ಮದೇವಿ ಉತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಹಾಗೂ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದೆ.
ದಾಸರಹಳ್ಳಿ ಮೆಟ್ರೋ ರೈಲು ಉದ್ಘಾಟನೆ
ದಾಸರಹಳ್ಳಿ ಮೆಟ್ರೋ ರೈಲು ಉದ್ಘಾಟನೆ ಶ್ರೀ. ಎಸ್ ಮುನಿರಾಜು ಅವರು ಹೊಸ ಜೀವನಾಡಿ ಬೆಂಗಳೂರಿನ ಮೆಟ್ರೋ ರೈಲನ್ನು ದಾಸರಹಳ್ಳಿ ಪ್ರದೇಶಕ್ಕೆ ತರಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ನಿಜವಾಗಿಯೂ ಯಶಸ್ವಿಯಾಗಿದ್ದಾರೆ. ಬೆಂಗಳೂರು-ತುಮಕೂರು ರಸ್ತೆಯ ತುಂಬ ಜನಸಂದಣಿಯಿಂದ ಪೀಣ್ಯಕ್ಕೂ ಮೆಟ್ರೋ ರೈಲಿನ ಮೂಲಕ ಪರ್ಯಾಯ ಮಾರ್ಗವನ್ನು ನೀಡಲಾಯಿತು. ಅದನ್ನೇ ನಾಗಸಂದ್ರಕ್ಕೂ ವಿಸ್ತರಿಸಲು ಮುಂದಾದರು. ಈಗ ಈ ಸೌಲಭ್ಯವು ಬೆಂಗಳೂರಿನ ಜನರಿಗೆ ಮತ್ತು ಹೊರಗಿನಿಂದ ಬರುವ ಪ್ರಯಾಣಿಕರಿಗೆ ತುಂಬಾ ಉಪಯುಕ್ತವಾಗಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೆಂಬಲ
ಪುಲ್ವಾಮಾ ದಾಳಿಯ ಸ್ಮಾರಕ
ವೀರಾದಿ ವೀರರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ವೀರ ಸೈನಿಕರಿಂದಾಗಿ ದೇಶದ ಜನತೆ ನೆಮ್ಮದಿಯಿಂದ ಬದುಕುವಂತಾಗಿದೆ. ಪುಲ್ವಾಮಾ ದಾಳಿ ನಡೆದು ನಾಲ್ಕು ವರ್ಷವಾಗಿದ್ದು, ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅರಳಿಕಟ್ಟೆ, ಸಿದ್ದೇನಹಳ್ಳಿ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಲಯಾಳಿ ಸಂಘಮಮ್
ನಮ್ಮದು ಭಾವನಾ ಭೂಮಿ, ಎಲ್ಲರನ್ನೂ ಸಮಾನವಾಗಿ ಮತ್ತು ನಮ್ಮವರಂತೆ ಕಾಣುವ ಗುಣ ನಮ್ಮಲ್ಲಿದೆ. ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಇಂದು ಮಲಯಾಳಿ ಚಿತ್ರನಟ ಹಾಗೂ ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಕೃಷ್ಣಕುಮಾರ್ ಅವರ ಸಮ್ಮುಖದಲ್ಲಿ ನಡೆದ ‘ಮಲೆಯಾಳಿ ಸಂಘಮಂ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದಾಸರಹಳ್ಳಿಯಲ್ಲಿ ಜನರ ಸೇವೆ
ದಾಸರಹಳ್ಳಿ ಕ್ಷೇತ್ರದ ಜನರ ಸೇವೆ ನಮ್ಮ ಆದ್ಯತೆ. ದಾಸರಹಳ್ಳಿ ಕ್ಷೇತ್ರದ ವಿವಿಧೆಡೆಯಿಂದ ಆಗಮಿಸುವ ಜನರ ಕುಂದು ಕೊರತೆಗಳನ್ನು ಆಲಿಸಿ ಶೀಘ್ರ ಪರಿಹರಿಸುವ ಭರವಸೆ ನೀಡಿದರು. ದಾಸರಹಳ್ಳಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ; ಜನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಜನರ ಕಲ್ಯಾಣವೇ ನಮ್ಮ ಆದ್ಯತೆ.
Service to the people of Dasarahalli
Service to the people of Dasarahalli constituency is our priority. Listen to the shortcomings of people coming from different parts of Dasarahalli constituency and promises to solve them soon. We aim to develop Dasarahalli; steps will be taken to solve the people’s problems. The welfare of the people is our priority.
Malayali Sanghamam
Ours is a land of emotion. We have the quality of seeing everyone as equal and as our own. Participated in the ‘Malayali Sanghamam’ program held today in the presence of Malayali film actor and BJP National Board member Krishna Kumar at Sri Sai Kalyana Mantapa in Bagalagunt, Dasarahalli constituency.