ಎಸ್ ಮುನಿರಾಜು ಅವರ ನಾಮಪತ್ರ ಸಲ್ಲಿಕೆ – ದಾಸರಹಳ್ಳಿಯಲ್ಲಿ ಮೊಳಗಿದ ಬಿಜೆಪಿ ಕಹಳೆ
All New Gallery ದಾಸರಹಳ್ಳಿಯಲ್ಲಿ ಮೊಳಗಿದ ಬಿಜೆಪಿ ಕಹಳೆ. ಅಪಾರ ಜನಸ್ತೋಮ, ಅಭೂತಪೂರ್ವ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ ಅವಿಸ್ಮರಣೀಯ ಕ್ಷಣ.ಇಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ದಾಸರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದೆ. ನಾಮಪತ್ರ ಸಲ್ಲಿಕೆಯ ಮೆರೆವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗಾಯಕರಾದ ಚಂದನ್ ಶೆಟ್ಟಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದರು. ಮೆರವಣಿಗೆ ಉದ್ದಕ್ಕೂ ಹರಿದು ಬಂದ ಜನಸಾಗರ, ಬಿಜೆಪಿಯ ಬಾವುಟ ಹಿಡಿದು, ಶಾಲನ್ನು ಧರಿಸಿ ಬಿಜೆಪಿಯನ್ನು ಹಾಗೂ ನನ್ನನ್ನು ಬೆಂಬಲಿಸಿದ ಕಾರ್ಯಕರ್ತರು, ಅಭಿಮಾನಿಗಳು, ಕ್ಷೇತ್ರದ ಜನತೆಗೆ […]
ಔರಾ ಸ್ಟುಡಿಯೋ ಉದ್ಘಾಟನೆ ಮಾಲೀಕರಿಗೆ ಶುಭ ಹಾರೈಕೆ. ನವ ಉದ್ಯಮಿಗಳಿಗೆ ಪ್ರೋತ್ಸಾಹ, ಶುಭ ಹಾರೈಕೆ
ಇಂದು ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಔರಾ (ಬ್ಯೂಟಿ ಪಾರ್ಲರ್) ಸ್ಟುಡಿಯೋವನ್ನು ಉದ್ಘಾಟಿಸಿ, ಶುಭ ಹಾರೈಸಿದೆ.ಈ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಅಣ್ಣಮ್ಮದೇವಿಗೆ ವಿಶೇಷ ಪೂಜೆ, ಸರ್ವರ ಒಳಿತಿಗಾಗಿ ಪ್ರಾರ್ಥನೆ
ದಾಸರಹಳ್ಳಿಯ ನೆಲಮಹೇಶ್ವರಿ ನಗರದಲ್ಲಿ ಗಂಧದಗುಡಿ ಕನ್ನಡ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ಅಣ್ಣಮ್ಮದೇವಿ ಉತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಹಾಗೂ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದೆ.
ದಾಸರಹಳ್ಳಿ ಶ್ರೀನಿವಾಸ ಕಲ್ಯಾಣೋತ್ಸವ
ಓಂ ಶ್ರೀ ವೆಂಕಟೇಶ್ವರಾಯ ನಮಃ |ಓಂ ಲಕ್ಷ್ಮೀಪತಯೇ ನಮಃ | ವಿವಿಧ ಮಂತ್ರಘೋಷಗಳ ನಡುವೆ ಅದ್ಧೂರಿಯಾಗಿ ನೆರವೇರಿದ ಜಗತ್ ರಕ್ಷಕ, ಲೋಕ ಪಾಲಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ. ಗೋವಿಂದನ ನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು. ದಾಸರಹಳ್ಳಿ ಕ್ಷೇತ್ರದ ಜನತೆಯ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ದಾರಸಹಳ್ಳಿಯ ಬಾಗಲಗುಂಟೆಯಲ್ಲಿ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ, ಯಶಸ್ವಿಯಾಗಿ ನೆರವೇರಿತು. ನೆರೆದಿದ್ದ ಸಾವಿರಾರು ಭಕ್ತರು ವಿಠ್ಠಲನ ದರ್ಶನ ಪಡೆದು ಪುಳಕಿತರಾದರು. ಗಣ್ಯರು ಸೇರಿದಂತೆ ಸಾವಿರಾರು ಮಂದಿ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡು ಲೋಕಪಾಲಕ ಗೋವಿಂದನ […]
ಜನಸ್ನೇಹಿ ಬಿಜೆಪಿ ಸರ್ಕಾರದ ಧ್ಯೇಯೋದ್ದೇಶ.
ಎಲ್ಲ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸುವುದು ಪಕ್ಷದ ಉದ್ದೇಶ. ಅದಕ್ಕಾಗಿಯೇ ನಮ್ಮ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದೆ.ಸಂಸದ ಶ್ರೀ ಸದಾನಂದ ಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಶ್ರೀ ಜಗ್ಗೇಶ್ ಅವರ ನೇತೃತ್ವದಲ್ಲಿ ದಾಸರಹಳ್ಳಿ ಕ್ಷೇತ್ರದ ಎಂಇಐ ಆಟದ ಮೈದಾನದಲ್ಲಿ 5 ಮಾರ್ಚ್ 2023 ರಂದು ಬೃಹತ್ OBC ಮೋರ್ಚಾ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲಾಯಿತು. ಜನರಿಗಾಗಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರೋಣ. ಅಭಿವೃದ್ಧಿಯ ಏಕೈಕ ಭರವಸೆ ಬಿಜೆಪಿ.
ದಾಸರಹಳ್ಳಿ ಮೆಟ್ರೋ ರೈಲು ಉದ್ಘಾಟನೆ
ದಾಸರಹಳ್ಳಿ ಮೆಟ್ರೋ ರೈಲು ಉದ್ಘಾಟನೆ ಶ್ರೀ. ಎಸ್ ಮುನಿರಾಜು ಅವರು ಹೊಸ ಜೀವನಾಡಿ ಬೆಂಗಳೂರಿನ ಮೆಟ್ರೋ ರೈಲನ್ನು ದಾಸರಹಳ್ಳಿ ಪ್ರದೇಶಕ್ಕೆ ತರಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ನಿಜವಾಗಿಯೂ ಯಶಸ್ವಿಯಾಗಿದ್ದಾರೆ. ಬೆಂಗಳೂರು-ತುಮಕೂರು ರಸ್ತೆಯ ತುಂಬ ಜನಸಂದಣಿಯಿಂದ ಪೀಣ್ಯಕ್ಕೂ ಮೆಟ್ರೋ ರೈಲಿನ ಮೂಲಕ ಪರ್ಯಾಯ ಮಾರ್ಗವನ್ನು ನೀಡಲಾಯಿತು. ಅದನ್ನೇ ನಾಗಸಂದ್ರಕ್ಕೂ ವಿಸ್ತರಿಸಲು ಮುಂದಾದರು. ಈಗ ಈ ಸೌಲಭ್ಯವು ಬೆಂಗಳೂರಿನ ಜನರಿಗೆ ಮತ್ತು ಹೊರಗಿನಿಂದ ಬರುವ ಪ್ರಯಾಣಿಕರಿಗೆ ತುಂಬಾ ಉಪಯುಕ್ತವಾಗಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೆಂಬಲ
ಪುಲ್ವಾಮಾ ದಾಳಿಯ ಸ್ಮಾರಕ
ವೀರಾದಿ ವೀರರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ವೀರ ಸೈನಿಕರಿಂದಾಗಿ ದೇಶದ ಜನತೆ ನೆಮ್ಮದಿಯಿಂದ ಬದುಕುವಂತಾಗಿದೆ. ಪುಲ್ವಾಮಾ ದಾಳಿ ನಡೆದು ನಾಲ್ಕು ವರ್ಷವಾಗಿದ್ದು, ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅರಳಿಕಟ್ಟೆ, ಸಿದ್ದೇನಹಳ್ಳಿ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಲಯಾಳಿ ಸಂಘಮಮ್
ನಮ್ಮದು ಭಾವನಾ ಭೂಮಿ, ಎಲ್ಲರನ್ನೂ ಸಮಾನವಾಗಿ ಮತ್ತು ನಮ್ಮವರಂತೆ ಕಾಣುವ ಗುಣ ನಮ್ಮಲ್ಲಿದೆ. ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಇಂದು ಮಲಯಾಳಿ ಚಿತ್ರನಟ ಹಾಗೂ ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಕೃಷ್ಣಕುಮಾರ್ ಅವರ ಸಮ್ಮುಖದಲ್ಲಿ ನಡೆದ ‘ಮಲೆಯಾಳಿ ಸಂಘಮಂ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದಾಸರಹಳ್ಳಿಯಲ್ಲಿ ಜನರ ಸೇವೆ
ದಾಸರಹಳ್ಳಿ ಕ್ಷೇತ್ರದ ಜನರ ಸೇವೆ ನಮ್ಮ ಆದ್ಯತೆ. ದಾಸರಹಳ್ಳಿ ಕ್ಷೇತ್ರದ ವಿವಿಧೆಡೆಯಿಂದ ಆಗಮಿಸುವ ಜನರ ಕುಂದು ಕೊರತೆಗಳನ್ನು ಆಲಿಸಿ ಶೀಘ್ರ ಪರಿಹರಿಸುವ ಭರವಸೆ ನೀಡಿದರು. ದಾಸರಹಳ್ಳಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ; ಜನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಜನರ ಕಲ್ಯಾಣವೇ ನಮ್ಮ ಆದ್ಯತೆ.