S Muniraju

ದಾಸರಹಳ್ಳಿಯಲ್ಲಿ ಮೊಳಗಿದ ಬಿಜೆಪಿ ಕಹಳೆ.

ಅಪಾರ ಜನಸ್ತೋಮ, ಅಭೂತಪೂರ್ವ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ ಅವಿಸ್ಮರಣೀಯ ಕ್ಷಣ.
ಇಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ದಾಸರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದೆ. ನಾಮಪತ್ರ ಸಲ್ಲಿಕೆಯ ಮೆರೆವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗಾಯಕರಾದ ಚಂದನ್ ಶೆಟ್ಟಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದರು.


ಮೆರವಣಿಗೆ ಉದ್ದಕ್ಕೂ ಹರಿದು ಬಂದ ಜನಸಾಗರ, ಬಿಜೆಪಿಯ ಬಾವುಟ ಹಿಡಿದು, ಶಾಲನ್ನು ಧರಿಸಿ ಬಿಜೆಪಿಯನ್ನು ಹಾಗೂ ನನ್ನನ್ನು ಬೆಂಬಲಿಸಿದ ಕಾರ್ಯಕರ್ತರು, ಅಭಿಮಾನಿಗಳು, ಕ್ಷೇತ್ರದ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಕಲಾ ತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದ್ದನ್ನು ಮರೆಯಲಾಗದು.

ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾ ಧನ್ಯ.
ಎಲ್ಲರೂ ಒಟ್ಟಾಗಿ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸೋಣ. ಅರಳಲಿದೆ ಕಮಲ, ಗೆಲ್ಲಲಿದೆ ಕರ್ನಾಟಕ