S Muniraju

ನನ್ನ ಕ್ಷೇತ್ರದ ಬಗ್ಗೆ

ದಾಸರಹಳ್ಳಿ ಕರ್ನಾಟಕದ ಒಂದು ವಿಧಾನಸಭಾ ಕ್ಷೇತ್ರ. ದಾಸರಹಳ್ಳಿ ಕರ್ನಾಟಕ ರಾಜ್ಯದ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸನ್ಮಾನ್ಯ. ಶ್ರೀ. ಡಿವಿ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ಲೋಕಸಭೆ (ಎಂಪಿ) ಕ್ಷೇತ್ರದಿಂದ ಗೆದ್ದಿದ್ದಾರೆ.

ದಾಸರಹಳ್ಳಿಯು 2019 ರ ಹೊತ್ತಿಗೆ 445,601 ಜನಸಂಖ್ಯೆಯನ್ನು ಹೊಂದಿತ್ತು. ದಾಸರಹಳ್ಳಿಯು ಸರಾಸರಿ 72% ಸಾಕ್ಷರತೆಯನ್ನು ಹೊಂದಿದ್ದು ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಾಗಿದೆ. ಇದರಲ್ಲಿ ಪುರುಷರ ಸಾಕ್ಷರತೆ 77%, ಮತ್ತು ಮಹಿಳಾ ಸಾಕ್ಷರತೆ 66%

ದಾಸರಹಳ್ಳಿ ವಿಧಾನಸಭಾ ಕ್ಷೇತ್ರವು ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೈಗಾರಿಕಾ ಪ್ರದೇಶವು ಬಡವರಿಗೆ ಮತ್ತು ಹಿಂದುಳಿದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ಹೇಳಲಾಗಿದ್ದರೂ ತನ್ನದೇ ಆದ ಕೆಲವು ಸಮಸ್ಯೆಗಳಿಂದ ಕೂಡಿದೆ.